‘ಭುಜಂಗ’ ತಲಕಾಡಿನಲ್ಲಿ ಬಿರುಸಿನ ಚಿತ್ರೀಕರಣ
Posted date: 04 Tue, Aug 2015 – 08:20:21 AM

ನಿರ್ಮಾಪಕ ವರುಣ್ ಮಹೇಶ್ ಅವರ ಚೊಚ್ಚಲ ಸಿನಿಮಾ ‘ಭುಜಂಗ’ ಜೀವ ಅವರ ನಿರ್ದೇಶನದಲ್ಲಿ, ಬಿ ಎ ಮಧು ಅವರ ಕಥೆ, ಚಿತ್ರಕಥೆ, ಸಂಭಾಷಣೆಯ ಸಾಹಸ, ಹಾಸ್ಯ, ಭಾವನಾತ್ಮಕ ವಿಷಯಗಳ ಸಂಗಮ ೩೦ ದಿವಸಗಳ ಕಾಲ ತಲಕಾಡಿನಲ್ಲಿ ಚಿತ್ರೀಕರಣದಲ್ಲಿ ತೊಡಗಿದೆ.

ಕಳೆದ ಸೋಮವಾರ ತಲಕಾಡಿನ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ಸಾಹಸದ ಸನ್ನಿವೇಶವನ್ನು ಮಾಸ್ ಮಾಧ ಅವರು ನಾಯಕ ಪ್ರಜ್ವಲ್ ದೇವರಾಜ್ ಹಾಗೂ ಸಂತೋಷ್ ಅವರ ನಡುವೆ ಏರ್ಪಡಿಸಿದ್ದರು. ನಾಲ್ಕು ದಿವಸಗಳ ಈ ಸಾಹಸ ಚಿತ್ರೀಕರಣದಲ್ಲಿ ನಾಯಕಿ ಮೇಘನ ರಾಜ್, ಜೈ ಜಗದೀಶ್, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಶ್, ತಬಲಾ ನಾಣಿ ಹಾಗೂ ಇತರರು ಪಾಲ್ಗೊಳ್ಳುವವರು ಎಂದು ಕಥೆಗಾರ ಬಿ ಎ ಮಧು ಅವರು ತಿಳಿಸಿದ್ದಾರೆ. ಇದೆ ಮೊದಲ ಬಾರಿಗೆ ಭರಚುಕ್ಕಿಯ ಸಣ್ಣ ಐಲಾಂಡ್ ಅಂತಹ ಸ್ಥಳದಲ್ಲಿ ಎರಡು ದಿವಸಗಳ ಕಾಲ ಒಂದು ಸನ್ನಿವೇಶಕ್ಕೆ ಚಿತ್ರೀಕರಣ ಮಾಡಲಾಗಿದೆ. ನಾಯಕ ಪ್ರಜ್ವಲ್ ದೇವರಾಜ್ ರೋಪ್ ಸಹಾಯದೊಂದಿಗೆ ನಾಯಕಿ ಮೇಘನ ರಾಜ್ ಅವರನ್ನು ಹೊತ್ತುಕೊಂಡು ಪೋಲ್ ವಾಲ್ಟ್ ರೀತಿಯಲ್ಲಿ ೫೦ ಅಡಿ ಹಾರಿ ನೆಲಕ್ಕೆ ಇಳಿದಿದದ್ದು ಬಿ ಎ ಮಧು ಅವರಿಂದ ಮೆಚ್ಚುಗೆಗೆ ಪಾತ್ರವಾಯಿತು.

೧೫ ದಿವಸಗಳಲ್ಲಿ ಮಾತಿನ ಭಾಗ ಹಾಗೂ ಎರಡು ಹಾಡುಗಳ ಚಿತ್ರೀಕರಣ ಸಂಪೂರ್ಣ ಆದರೆ ‘ಭುಜಂಗ’ ಚಿತ್ರೀಕರಣ ಮುಗಿಯುತ್ತದೆ. ಇದುವರೆವಿಗೂ ೪೮ ದಿವಸಗಳ ಕಾಲ ಚಿತ್ರೀಕರಣ ಮಾಡಲಾಗಿದೆ, ಹೇಳಿದ ಬಜೆಟಿಗಿಂತ ಈ ಸಿನಿಮಾಕ್ಕೆ ಹೆಚ್ಚು ವೆಚ್ಚ ತಗಲಿದೆ. ಯಾವುದೇ ಸನ್ನಿವೇಶಕ್ಕೆ ಕೊರತೆ ಆಗದೆ ಹಾಗೆ ನೋಡಿಕೊಂಡಿರುವೆ ಎಂದು ನಿರ್ಮಾಪಕ ವರುಣ್ ಮಹೇಶ್ ಅವರು ತಿಳಿಸಿದ್ದಾರೆ. ೫೦ ಆಸ್ಪತ್ರೆಗಳನ್ನು ವಿಚಾರಿಸಿ ಕಡೆಗೆ ತಲಕಾಡಿನ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರ ವಹಿಸಿದ್ದಾರೆ ನಿರ್ಮಾಪಕರು.

ಇದೊಂದು ನನ್ನ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಸಾಹಸ ಭರಿತ ಸಿನಿಮಾ. ನಾನಿಲ್ಲಿ ಒರಟ. ದಾಡಿ ಹಾಗೂ ಮೀಸೆ ಹೊಂದಿರುವ ಸಣ್ಣ ಕಳ್ಳತನ ಮಾಡುತ್ತಾ ಬದುಕುವ ಪಾತ್ರ. ಮಾಸ್ ಮಾಧ ಅವರು ಚನ್ನಾಗಿ ಬೆಂಡು ತೆಗೆದು ಕೆಲಸ ಮಾಡಿಸಿದ್ದಾರೆ. ಅತ್ಯಂತ ಮುತುವರ್ಜಿ ಇಂದ ನಾನು ಅಭಿನಯಿಸಿದ್ದೇನೆ. ಸಾಹಸ ಸನ್ನಿವೇಶಗಳಲ್ಲಿ ಡ್ಯೂಪ್ ಇಲ್ಲದೆ ಕೆಲಸ ಮಾಡಿದ್ದೇನೆ. ಜೀವ ಅವರ ನಿರ್ದೇಶನದಲ್ಲಿ ಇನ್ನೊಂದು ಸಿನಿಮಾ ಮಾಡುವಷ್ಟು ಅವರು ಇಷ್ಟವಾಗಿದ್ದಾರೆ ಎಂದು ನಾಯಕ ಪ್ರಜ್ವಲ್ ವಿವರಿಸಿದ್ದಾರೆ. ಈ ಸಿನಿಮಾಕ್ಕೆ ಸಂತೋಷ್ ಅಂತ ನಾಯಕ ಬೇಕಾಗಿತ್ತು, ಕಾರಣ ಆ ಪಾತ್ರ ನಾಯಕನಿಗೆ ಕೆಲವು ಹಿತವಚನ ಹೇಳುವ ಸನ್ನಿವೇಶವಿದೆ ಎಂದು ಹೇಳಿಕೊಂಡರು ಪ್ರಜ್ವಲ್.

ನಾಯಕ ಸಂತೋಷ್ ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೆ ಕಾರಣ ಅವರ ಹಾಗೂ ಪ್ರಜ್ವಲ್ ಅವರ ಸ್ನೇಹ. ‘ನೂರು ಜನ್ಮಕು’ ನಂತರ ಅವರು ಸಿನಿಮಾದಲ್ಲಿ ಅಭಿನಯಿಸಲು ಬಂದಿದ್ದಾರೆ. ಅವರು ‘ಭುಜಂಗ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್.

ಇಲ್ಲಿಯವರೆಗೆ ಚಿತ್ರೀಕರಣ ಸುಗಮವಾಗಿ ನಡೆದಿರುವುದಕ್ಕೆ ನಿರ್ದೇಶಕ ಜೀವ ಅವರಿಗೆ ಸಂತೋಷವಿದೆ. ಚಿತ್ರದ ಬಜೆಟ್ಟು ಜಾಸ್ತಿ ಆಗುವ ಸೂಚನೆ ಕಂಡಾಗ ನಿರ್ಮಾಪಕರಿಂದ ಒಪ್ಪಿಗೆ ಪಡೆದು ಚಿತ್ರೀಕರಣ ಮಾಡಲಾಗಿದೆ ಎಂದರು ಜೀವ. ಮಾಸ್ ಮಾಧ ಅವರು ಚಿತ್ರದ ಮಧ್ಯಂತರದ ನಂತರ ಸಿನಿಮಾದಲ್ಲಿ ಅವರಿಸಿಕೊಳ್ಳುವಷ್ಟು ಹೊಸ ಬಗೆಯ ಸಾಹಸ ನಿರ್ದೇಶನ ಮಾಡಿದ್ದಾರೆ. ಮೂರು ದೊಡ್ಡ ಸಾಹಸ ಸನ್ನಿವೇಶಗಳ ಜೊತೆ ಮೂರು ಪುಟ್ಟ ಸಾಹಸ ಸನ್ನಿವೇಶಗಳಿಗೆ ಅವರು ೧೫ ದಿವಸ ಈ ‘ಭುಜಂಗ’ ಸಿನಿಮಾಕ್ಕೆ ದುಡಿದ್ದಾರೆ. ಪೋಲ್ ವಾಲ್ಟ್ ಶೈಲಿಯ ಸಾಹಸಕ್ಕೆ ಅವರು ಮೂರು ದಿವಸ ತಗೆದುಕೊಂಡಿದ್ದಾರೆ.

ಗುಂಡಲ್ಪೇಟ್ ಸುರೇಶ್ ಅವರ ಛಾಯಾಗ್ರಹಣದಲ್ಲಿ ಅನೇಕ ಸಲಕರಣೆಗಳನ್ನು ನಿರ್ಮಾಪಕರು ನೀಡಿ ಅದನ್ನು ಸರಿಯಾದ ರೀತಿ ಬಳಕೆ ಆಗುವುದಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕ ಜೀವ ಅವರಿಗೆ ಧನ್ಯವಾದ ತಿಳಿಸಿದರು.  ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ಮಧುರ ಸ್ವಪ್ನ ಚಿತ್ರೀಕರಣ ಪೂರ್ಣ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed